ಉಪಾಕರ್ಮ

ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:

ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ “ಅಹಂ ಬ್ರಹ್ಮಾಸ್ಮಿ” ” ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು” ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.

೧.ಪ್ರ: ಉಪಾಕರ್ಮ ಎಂದರೇನು ?

ಉ: “ಉಪಾಕರ್ಮ” ಅಥವಾ ಉಪಕ್ರಮ ಎಂದರೆ ಪ್ರಾರಂಭ.

೨.ಪ್ರ: – ಯವುದರ ಪ್ರಾರಂಭ ?

ಉ: ವೇದಾಧ್ಯಯನದ ಪ್ರಾರಂಭ.

೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?

ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
“ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ ”
ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.

೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?

ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.

೬. ವೇದವ್ರತಗಳಾದ ಈ ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?

ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು ಮಾಡಲೇಬೇಕೆಂಬ ನಿಯಮವಿಲ್ಲ.

೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?

ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.

೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?

ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.
ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ) ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.
ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ ಉತ್ಸರ್ಜಿಸುವ ಕ್ರಮ.

೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?

ಉ: ಇವುಗಳು ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.

೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?

ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.

೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?

ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?

ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?

ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.

೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?

ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.
ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.

ಹರಿಃ ಓಂ ತತ್ ಸತ್ ||

*Adhika maasa*

*Adhika maasa*

Adhika Maasa
This time Adhika Jyesta maasa starts on 16.5.2018 and ends on 13.6.2018

*What is Adhika Masa*?

ಸಾಮಾನ್ಯವಾಗಿ ಪ್ರತಿ ಚಾಂದ್ರಮಾಸದಲ್ಲೂ ಒಂದು ಸಂಕ್ರಮಣ ಇದ್ದೇ ಇರುತ್ತದೆ. ಒಂದು ಸಂಕ್ರಮಣವೂ ಸಹ ಸಂಭವಿಸದ ಚಾಂದ್ರಮಾಸವನ್ನು ಅಧಿಕಮಾಸ ಅಥವಾ ಮಲಮಾಸವೆನ್ನುತ್ತಾರೆ.

“ಅಧಿಕಸ್ಯಾಧಿಕಂ ಫಲಂ”. ಸರಾಸರಿ 33 ತಿಂಗಳಿಗೊಮ್ಮೆ ಪ್ರಾಪ್ತವಾಗುವ ಅಧಿಕಮಾಸವು ಬಹಳ ಮಹತ್ವವಾದುದು, ಮತ್ತು ಸಾಧನೆಗೆ ಸಹಕಾರಿ. ವಿಷ್ಣುಪಂಚಕಾದಿ ವರ್ಷಪೂರ್ತಿ ಮಾಡಬೇಕಾದ ವ್ರತಗಳನ್ನು ಮಾಡಲಾಗದವರು ಈ ಒಂದು ತಿಂಗಳಲ್ಲಿ ಆ ಐದು ಉಪವಾಸಗಳನ್ನು ಮಾಡಿದರೆ ಅದು “ಲಘು ವಿಷ್ಣುಪಂಚಕ”ವೆಂದು ಕರೆಯಲ್ಪಡುತ್ತದೆ.

ಶ್ರೀ ಪುರುಷೋತ್ತಮರೂಪವು ಅಧಿಕಮಾಸದ ಅಧಿದೇವತೆ. ಅದರಿಂದಾಗಿಯೇ ಪುರುಷೋತ್ತಮಮಾಸವೆಂದೂ ಈ ಮಾಸವನ್ನು ಕರೆಯುತ್ತಾರೆ. ಜ್ಯೇಷ್ಟ ಮಾಸಕ್ಕೆ ನಿಯಾಮಕ ರೂಪ – ರಮಾತ್ರಿವಿಕ್ರಮ. ಆದ್ದರಿಂದ ಈ ಸಲದ ಅಧಿಕ ಜ್ಯೇಷ್ಟಮಾಸಕ್ಕೆ ಪುರುಷೋತ್ತಮ-ತ್ರಿವಿಕ್ರಮರೂಪಗಳು ಅಧಿದೇವತೆ.

ಪ್ರತಿಯೊಂದು ಅಪೂಪದಲ್ಲೂ ವಿಷ್ಣು, ಜಿಷ್ಣು ಮೊದಲಾದ ಭಗವದ್ರೂಪಗಳನ್ನು ಚಿಂತಿಸಿ ೩೩ ಅಪೂಪಗಳನ್ನು ದಂಪತಿಸಹಿತ ಸದ್ಬ್ರಾಹ್ಮಣರಿಗೆ ಕಂಚಿನಪಾತ್ರೆಯಲ್ಲಿರಿಸಿ ದಾನ ಮಾಡುವುದು ಈ ವ್ರತದ ಮುಖ್ಯ ಅಂಶ. ಪ್ರತಿನಿತ್ಯ ಮಾಸಪೂರ್ತಿ ಅಪೂಪ ದಾನವನ್ನು ಮಾಡತಕ್ಕದ್ದು. ಅಥವಾ ಕನಿಷ್ಟ ಒಂದು ದಿನವಾದರೂ ಮಾಡತಕ್ಕದ್ದು. ಅಧಿಕಮಾಸದಲ್ಲಿ ದ್ವಾದಶಿ, ಹುಣ್ಣಿಮೆ ಅಥವಾ ಯಾವುದೇ ಶುಭ ದಿನಗಳಲ್ಲಿ ಬೆಲ್ಲ, ತುಪ್ಪ ಮಿಶ್ರಿತ ಮೂವತ್ತಮೂರು ಅಪೂಪಗಳನ್ನು ಕಂಚಿನ ಪಾತ್ರೆಯಲ್ಲಿರಿಸಿ ಸಾಧ್ಯವಾದರೆ ಸುವರ್ಣ ಸಹಿತ, ಯೋಗ್ಯ ಬ್ರಾಹ್ಮಣರಿಗೆ ದಾನವೀಯಬೇಕು. ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲ ಸ್ವರ್ಗಲೋಕದಲ್ಲಿ ವಾಸಿಸುವ ಪುನ್ಯವು ಲಭಿಸುತ್ತದೆ. ಮೂವತ್ತಮೂರು ದೇವತೆಗಳನ್ನುದ್ದೇಶಿಸಿ ಮಾಡುವ ಅಪೂಪದಾನವೌ ಪೃಥ್ವೀದಾನದ ಫಲವನ್ನು ನೀಡುತ್ತದೆ.

ಇತರ ಮಾಸಗಳಲ್ಲಿ ಮಾಡುವ ಧಾರಣ ಪಾರಣ, ವಿಷ್ಣುಪಂಚಕ, ಏಕಭುಕ್ತ, ಲಕ್ಷಪ್ರದಕ್ಷಿಣ, ಲಕ್ಷ ನಮಸ್ಕಾರ, ಲಕ್ಷ ದೀಪ, ಇನ್ನಿತರ ವ್ರತಗಳನ್ನು ಅಧಿಕಮಾಸದಲ್ಲಿ ಮಾಡುವುದು ವಿಶೇಷ ಫಲ.

ಅಪೂಪದಾನ ಪ್ರತಿನಿತ್ಯ ಮಾಡತಕ್ಕದ್ದು. ಅಥವಾ ಈ ಕೆಲವು ಶ್ರೇಷ್ಟದಿನಗಳಲ್ಲಿ ಒಂದು ದಿನ ಮಾಡಿದರೆ ಶ್ರೇಷ್ಟ ಅಥವಾ ಯಾವುದಾದರೂ ಒಂದು ದಿನ ಮಾಡತಕ್ಕದ್ದು.

*ಅಪೂಪದಾನ ಶ್ರೇಷ್ಟ ದಿನಗಳು*– ಶುಕ್ಲ ಮತ್ತು ಕೃಷ್ಣ ದ್ವಾದಶಿ, ಪೌರ್ಣಿಮ, ಅಮಾವಾಸ್ಯೆ, ನವಮಿ, ಚತುರ್ದಶಿ, ವೈಧೃತಿ, ವ್ಯತೀಪಾತ ಯೋಗ, ಪುಷ್ಯಾರ್ಕ ಯೋಗ.

*ಅಧಿಕಮಾಸದಲ್ಲಿ ನಿಷಿದ್ಧ ಕಾರ್ಯಗಳು* : ಕೆರೆ ಕಟ್ಟಿಸುವುದು, ಉಪನಯನ, ಸನ್ಯಾಸ ಸ್ವೀಕಾರ, ಜ್ಯೋತಿಷ್ಟೋಮಾದಿ ಕಾಮ್ಯಕರ್ಮಗಳು, ಮಗುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದೊಯ್ಯುವುದು, ಪಟ್ಟಾಭಿಷೇಕ, ಚೌಲ, ಅನ್ನ ಪ್ರಾಶನ, ಗೃಹಾರಂಭ, ಗೃಹಪ್ರವೇಶ, ವಿವಾಹ, ನಾಮಕರಣ.

*ಅಧಿಕಮಾಸ ದಾನ ಸಂಕಲ್ಪ* – ಆಚಮನ, ಪ್ರಣಾಯಾಮ, ದೇಶಕಾಲ ಉಚ್ಚಾರಣ, ….. ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಅಸ್ಮತ್ ಗುರುವಂತರ್ಗತ, ಶ್ರೀ ರಾಘವೇಂದ್ರತೀರ್ಥ ಗುರುವಂತರ್ಗತ, ತ್ರಯ: ತ್ರಿಂಶಕ್ ಕೋಟಿ ದೇವತಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಅಸ್ಮತ್ ಕುಲದೇವತಾಭಿನ್ನ ಶ್ರೀಪದ್ಮಿನಿ ಪುರುಷೋತ್ತಮ ಪ್ರೇರಣಯಾ ಪದ್ಮಿನಿ ಪುರುಷೋತ್ತಮ ಪ್ರೀತ್ಯರ್ಥಂ, ….. ಗೋತ್ರಸ್ಯ, …. ಶರ್ಮಣ: ಮಮ ಧರ್ಮ – ಅರ್ಥ – ಕಾಮ – ಮೋಕ್ಷ ಪ್ರಾರ್ತ್ಯರ್ಥಂ, ಜ್ಞಾನ, ಭಕ್ತಿ ವೈರಾಗ್ಯ ಸಿದ್ದ್ಯರ್ಥಂ ನಿಖಿಲಪಾಪಕ್ಷಯ ಶಮನ ಪೂರ್ವಕ ಪುತ್ರ, ಪೌತ್ರ, ಧನ, ಧಾನ್ಯ, ಕ್ಷೇಮ ಸಮೃದ್ಧಿ ಲೋಕದ್ವಯ ಸುಖಹೇತು, ಭೂದಾನ್ ಫಲಪ್ರಾಪ್ತೈ ಅಪೂಪ ಛಿದ್ರ ಸಮಸಂಖ್ಯ ವರ್ಷ ಸಹಸ್ರಾವಧಿ ಸ್ವರ್ಲೋಕನಿವಾಸಾದಿ ಫಲ ಸಿದ್ದ್ಯರ್ಥಂ ಅಧಿಕಮಾಸ ಪ್ರಯುಕ್ತ ತ್ರಯ ತ್ರಿಂಶತ್ ಅಪೂಪದಾನಮಹಂ ಕರಿಷ್ಯೇ |

*ಅಪೂಪದಾನಕಾಲದಲ್ಲಿ ಚಿಂತಿಸಬೇಕಾದ ಭಗವದ್ರೂಪಗಳು* :

ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಹರಿಂ ಕೃಷ್ಣಮಧೋಕ್ಷಜಂ |
ಕೇಶವಂ ಮಾಧವಂ ರಾಮಂ ಅಚ್ಯುತಂ ಪುರುಷೋತ್ತಮಂ |
ಗೋವಿಂದಂ ವಾಮನಂ ಶ್ರೀಶಂ ಶ್ರೀಕಂಠಂ ವಿಶ್ವಸಾಕ್ಷಿಣಂ |
ನಾರಾಯಣಂ ಮಧುರಿಪುಂ ಅನಿರುದ್ಧಂ ತ್ರಿವಿಕ್ರಮಂ |
ವಾಸುದೇವಂ ಜಗದ್ಯೋನಿಮನಂತಂ ಶೇಷಶಾಯಿನಂ |
ಸಂಕರ್ಷಣಂ ಚ ಪ್ರದ್ಯುಮ್ನಂ ದೈತ್ಯಾರಿ ವಿಶ್ವತೋಮುಖಂ |
ಜನಾರ್ದನಂ ಧರಾವಾಸಂ ದಾಮೋದರಮಘಾರ್ದನಂ |
ಶ್ರೀಪತಿಂ ಚ ತ್ರಯಸ್ತ್ರಿಂಶದುದ್ದಿಶ್ಯ ಪ್ರತಿನಾಮಭಿ: |
ಮಂತ್ರೈರೇತೈಶ್ಚ ಯೋ ದದ್ಯಾತ್ ತ್ರಯಸ್ತ್ರಿಂಶದಪೂಪಕಂ |
ಪ್ರಾಪ್ನೋತಿ ವಿಪುಲಾಂ ಲಕ್ಷ್ಮೀ ಪುತ್ರಪೌತ್ರಾದಿಸಂತತಿಂ |

Adhika Masa is the thirteenth month in a Calender year followed by Lunar Calender,i.e., Chandramana reethya. It is not followed by those who are following Solar Calender, i.e., Sourmaana Reethya.

As per Chandramaana reethya, we have 354 days in a calendar year. But as per Souramana reethya, (Solar Calender) we have 365 days. So, there is a difference of 11 days between Sourmana reethya and Chandramana reethya. So, these extra days difference of 11 days will be added, once in 33 months (32 months, 16 days , and 4 ghalige to be precise) , so that there is extra 29 or 30 days in that particular year. This concept of adding one extra month after every 33 months is known as Adhika Masa.

In states like Karnataka, Andhrapradesh, Gujarat, Maharashtra, etc, the adhika maasa begins on Shudda padya and ends on Amavasya day (New moon day). In North India, Adhika Masa begins on Bahula Padya, and ends on Hunnime (Full moon day). Whereas in states like Assam, Bengal, Kerala, Tamilnadu, there is no adhika maasa for them, as they are following solar calendar.

*ಪುರುಷೋತ್ತಮರೂಪದ ಲಕ್ಷಣ* :

ಭಗವದ್ಗೀತೆಯಲ್ಲಿ ಚಿತ್ರಿಸಿರುವಂತೆ ಕ್ಷರಾಕ್ಷರ ಪುರುಷೋತ್ತಮನಾದ ಶ್ರೀಹರಿ.

ಶ್ರೀಮದಾಚಾರ್ಯರ ತಂತ್ರಸಾರ ಸಂಗ್ರಹಾದಿ ಗ್ರಂಥದಲ್ಲಿ ಬಂದಿರುವಂತೆ ಪುರುಷೋತ್ತಮರೂಪವು –

ಮೇಲಿನ ಬಲಗೈಯಲ್ಲಿ ಪದ್ಮ ; ಕೆಳ ಬಲಗೈಯಲ್ಲಿ ಚಕ್ರ
ಮೇಲಿನ ಎಡಗೈಯಲ್ಲಿ ಶಂಖ; ಕೆಳಗಿನ ಎಡಗೈಯಲ್ಲಿ ಗದೆ ಎಂದು ಚಿಂತಿಸಬೇಕು.

ತ್ರಿವಿಕ್ರಮ ರೂಪವು –
ಕೆಳಗಿನ ಬಲಗೈಯಲ್ಲಿ ಶಂಖ ; ಎಡಗೈಯಲ್ಲಿ ಪದ್ಮ
ಮೇಲಿನ ಬಲಗೈಯಲ್ಲಿ ಚಕ್ರ ; ಎಡಗೈಯಲ್ಲಿ ಗದಾ

*Adhika Maasa is applicable for Chandramana followers only*.

The lunar calendar is completely synchronizes with the solar calendar in a period of 60 years.

Mathematically speaking a Chandramana Varsha (Lunar calendar = 29.5305 X 12 = 354.366 days) has 354 days, while a Soura Varsha (Solar calendar = 365.2587 days) has 365 days, the difference being 11 days per year.

For one year (12 months) – 11 days

For second year (12 months) – 11 days

For 8 months ( 8 months) – 7 ½ days

For 16 days & 4 galige – ½ days –

——————————————

Total 33 months – 30 days

—————————————

“dvaatrimshadbhi: gatai: maasai: dinai: ShOdashabhistatha|

GaTikaanaaM chatuShkENa patatyadhikamaasaka: “ ||

द्वात्रिंशद्भि: गतै: मासै: दिनै: षोदशभिस्तथ।
घटिकानां चतुष्केण पतत्यधिकमासक: ।

ದ್ವಾತ್ರಿಂಶದ್ಭಿ: ಗತೈ: ಮಾಸೈ: ದಿನೈ: ಷೋದಶಭಿಸ್ತಥ|
ಘಟಿಕಾನಾಂ ಚತುಷ್ಕೇಣ ಪತತ್ಯಧಿಕಮಾಸಕ: |

Sankramana during Adhika Masa – During Adhika Masa, there will not be any sankramana. That is why it is said “asankraantamaasOdhimaasa:”.

Note : Normally Adhikamasa will be happening once in 33 months. Sometimes, it may happen in 29 months, 30 months, 31 months, and 35 months also due to the variations in Graha sanchara. That is why it is said in Mahabharatha that the Adhikamasa will be occurring twice in 5 years.

panchamE panchamE varshE dvaumaasaavadhimaasakau |

tEshaam kaalaatirEkENa grahaaNaamatichaarata: |

ಪಂಚಮೇ ಪಂಚಮೇ ವರ್ಷೇ ದ್ವೌಮಾಸಾವಧಿಮಾಸಕೌ |
ತೇಶಾಂ ಕಾಲಾತಿರೇಕೇಣ ಗ್ರಹಾಣಾಮತಿಚಾರತ: |

Further, Adhika maasa will happen when there are two Hunnime or two amaavaasye days during the two sankramanaas.

*Purushottama maasa shrestatva* – Sri Purushottama is the masa niyamaka for this adhika maasa. That is why it is called as “Purushottama Maasa”.

Other names for Adhika Masa –

*“Mala Maasa”* – as Srihari will remove all our sins during this maasa. As this month will be without sankranti, there is no importance of Shubha kaarya like Marriage, Upanayana, Gruhapravesha, etc.

*“malimlucha”*, – When there is no sun in a particular month it is termed as “Malimucha”.

There are dwadashadityaru, viz., AruNa, Surya, bhaanu, tapana, indra, ravi, gabhasti, Aryama, hiraNyarEtasa, divaakara, mitra, viShNu will be born in each twelve months.

There will be no sun during the thirteenth month. Therefore the works of the Sun will be done by the suryamandala itself.

ಮಾಸೇಷು ದ್ವಾದಶಾದಿತ್ಯಾ: ತಪಂತೇ ಹಿ ಯಥಾಕ್ರಮಂ |
ನಪುಂಸಕೇಧಿಕೇ ಮಾಸಿ ಮಂಡಲಂ ತಪಸೇ ರವೆ ||

मासेषु द्वादशादित्या: तपंते हि यथाक्रमं ।
नपुंसकेधिके मासि मंडलं तपसे रवॆ ॥

maasEShu dvaadashaadityaa: tapaMtE hi yathaakramaM |

napuMsakEdhikE maasi maMDalaM tapasE rave ||

*“purushottama maasa”* – as Purushottama is the maasa niyamaka. Once Chaturmuka brahmadevaru kept the Saadhane done through Vedokta acharane in one side of a scale and sadhane done done during purushottama maasa. Then the scale weighed more in purushottama sadhane side itself, which clearly explains the importance of Adhika maasa

*Duties during Adhika Maasa*–

ಅಧಿಕಮಾಸದಲ್ಲಿ ವಿಶೇಷ – ಭಾಗವತ ಶ್ರವಣ, ಭಾಗವತ ಪುಸ್ತಕದಾನ, ನಕ್ತಭೋಜನ, ಏಕಭುಕ್ತ, ಉಪೋಷಣ, ಮೌನವ್ರತ, ಅಧ:ಶಯನ, ಆಲವಣವ್ರತ, ನಖಾ-ಕೇಶ ವ್ರತ, ವಿಷ್ಣುಪಂಚಕ, ಧಾರಣಪಾರಣ, ಅಯಾಚಿತ ವ್ರತ, ತಾಂಬೂಲ ದಾನ, ದೀಪದಾನ, ಅಪೂಪದಾನ, ಫಲದಾನ,

*Maasa snaana* – Throughout the month, we have to get up early during arunodayakala itself and do the snaana in rivers, and thirthas or atleast in wells. (Even when we are doing the snaana in a Pipeline water supplied by watersupply board, we have to do the chintana of Ganga sankalpa and do it).
*Nakta Bhojana* – We have to do the fasting till night and do the bhojana only in the night.

*Ayachita Vrata*– We must not ask anybody anything. We have be yadruchchaalaaba santrupta.

*Dharana paarana*– One day upavaasa (DharaNa), next day (PaaraNa) – with this 15 days upavasa and 15 days bhojana.

*Tambula Daana*– During Adhikamasa, if we give tamboola daana to brahmana suvasiniyaru, our dourbhagya will be removed and we will get soubhagya.
*Deepa daana* – During this month we have to light “Akanda deepa” in the devara mane. We must ensure that the deepa never goes off throughout the day-night.

*Apoopa daana* – During this month, one has to give apoopadaana of 33 apoopa to brahmana daily. However, we can give more than 33 also, but not less than 33. If it is not possible to give apoopa daana on all the days, one can give it on any particular day. It must be accompanied by same number of Tamboola (Villedele), and dakshine.

If we are doing on any single day – Shukla dwaadashi, pourNami, Krishna Dwadashi, amavasye, Krishna paksha astami, navami and chaturdashi is preferable.

Apoopa must be made of Rice, jiggery, ghee. By giving the apoopa daana, we will get the punya equal to pruthvi daana.

*Phala daana* – Actually apoopa daana is the Best. But we can give daana of Fruits, like mangoes, bananas, etc. Each fruits must have be alongwith 33 tambola villedele, 33 dakshine, etc.

*Kamyakarma nishiddha* – During Adhka Maasa, Marriage, Upanayana, Gruhapravesha, choula, sanyasa sweekara, annaprashana, – must not be done as these are kaamyakarma. However Homa – Havana done with the intention of pleasing srihari, bhagavatpoojartham it can be done. If we have already started any kaamyakarma prior to adhika maasa, it can be continued, but new karmas not be started.

*Shraddhas* – Samvatsarika shraddha if it is falling during a month of Adhika maasa, it has to be done in Nija maasa. Eg. Shraaddha falling during Vaishaka Maasa must be done in regular vaishaka maasa and not in Adhika Vaishaka Maasa.

*Shraaddhaa* – monthly shraadhaas during Adhika Maasa – If one has died in a year and his monthly shraaddha to be done in Adhikamasa apart from regular monthly shraddha.

*Chaturmasya* – If during Chaturmasya, Adhika maasa comes, then we have to observe Chaturmasya + Adhikamaasa. If during Shaka vratha adhikamasa comes, Shaka Vratha must be done for two months.

*Mahalaya Maasa*– If during Bhadrapada Maasa adhika Maasa, comes, then Mahalaya Paksha to be done in both Adhika and nija Bhadrapada maasa.

33 devatas in apoopadaana
Sl No Devate antaryami roopa

*Astavasugalu* –
1 DrONa – VishNu
2. Dhruva – Jishnu
3. Dosha – MahavishNu
4. Arka – Hari
5. Agni – Krishna
6. Dyou – Adhokshaja
7. PraaNa – Keshava
8. Vibhavasu – Madhava

*Ekadasha Rudraru*
9. Bheema – Raama
10. Raivata – Achyuta
11. Oja – Purushottama
12 Ajaikapaat – Govinda
13. Mahaan – Vamana
14. Bahuroopa – ShrIsha
15. Bhava – ShrIkanTa
16. Vaamadeva – Vishvasaakashi
17. Ugra – NaarayaNa
18. VruShaakapi – Madhuripu
19. Ahirbudhni – Aniruddha

*Dwadashadityaru*
20. Vivaswaan – Trivikrama
21. Aryamaa – VaasudEva
22. Poosha – JagadyOni
23. tvaShTru – AnaMta
24. Savitru – Sheshasaayi
25. Bhaga – SankarshaNa
26. Dhaatru – Pradyumna
27. Parjanya – Daityaari
28. VaruNa – VishvatOmukha
29. Mitra – Janardhanah
30. Shakra – Dharaavaasa
31. Urukrama – Daamodara
32. Prajapathi – Agardhana
33. Vashatkara – ShrIpati

ಅಧಿಕಮಾಸದಲ್ಲಿ ಚಿಂತಿಸಬೇಕಾದ 33 ದೇವತೆಗಳು :
ಅಷ್ಟವಸುಗಳು 8 ;
ಏಕಾದಶ ರುದ್ರರು 11 ;
ದ್ವಾದಶಾದಿತ್ಯರು 12;
ಪ್ರಜಾಪತಿ 1,
ವಷಟ್ಕಾರ 1

*Adhikamaasa katha*–

Once Lakshmidevi asked Srihari as to how to perform the Adhika Maasa pooja and what are the daanaas to be during Adhikamasa.

Then Srihari told her that he himself is the God for the Adhika maasa with the name Purushottama. What ever punya kaarya lika snaana, japa, homaa will bring akshaya phala. He also told that those who does not do any punya karya during Adhika Maasa will be getting daaridrya, putrashoka, etc

Those who could not do for the whole month can do it atleast on Krishna paksha Astami, navami, chaturdashi, Dwadashi, pournami, chaturdashi, etc.

Earlier there lived a brahmana by name Kaushika who was a jitendriya. He had a son by name maitreya who was addicted to drinking and was a kamaandha. One day Maitreya went to forest. He killed a brahmana in Sourashtra and snatched all the money with the Brahmin. Because he killed that brahmana, the whole City itself was burnt. As he got brahma hatya dosha, Maitreya was taken by Yamadootharu and was thrown in Krumeekunda. He was in the Hell for more than 10000 years. After a long period, Kaushika, the father of Maitreya came to know about the same. Kaushika searched all the shruthi – shaastraas and found a remedy for brahmahatya parihara.

He did the Vratha named Adhikamasa Vratha and gave 33 apoopadaana and his son was saved from the Hell.

As such, Adhikamasa vratha, if done with proper anusandhana can remove Brahmahatya dosha .

ಶ್ರೀ ಶಾರದಾ ಅಷ್ಟೋತ್ತರ ಶತನಾಮಾವಳಿಃ

ಶ್ರೀ ಶಾರದಾ ಅಷ್ಟೋತ್ತರ ಶತನಾಮಾವಳಿಃ
____________________________

ಓಂ ಸರಸ್ವತ್ಯೈ ನಮಃ |
ಓಂ ಮಹಾಭದ್ರಾಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ವರಪ್ರದಾಯೈ ನಮಃ |
ಓಂ ಶ್ರೀ ಪ್ರದಾಯೈ ನಮಃ |
ಓಂ ಪದ್ಮನಿಲಯಾಯೈ ನಮಃ |
ಓಂ ಪದ್ಮವಕ್ತ್ರಿಕಾಯೈ ನಮಃ |
ಓಂ ಶಿವಾನುಜಾಯೈ ನಮಃ |
ಓಂ ರಮಾಯೈ ನಮಃ |
ಓಂ ಪುಸ್ತಕಧಾರಿಣ್ಯೈ ನಮಃ | 10
ಓಂ ಕಾಮರೂಪಾಯೈ ನಮಃ |
*ಓಂ ಶಾರದಾ ದೇವಿಯೈ ನಮಃ |*
ಓಂ ಮಹಾವಿದ್ಯಾಯೈ ನಮಃ |
ಓಂ ಮಹಾಪಾತಕನಾಶಿನ್ಯೈ ನಮಃ |
ಓಂ ಮಹಾಶ್ರಿಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ದಿವ್ಯಾಂಗಾಯೈ ನಮಃ |
ಓಂ ಮಾಲಿನ್ಯೈ ನಮಃ |
ಓಂ ಮಹಾಕಾಲ್ಯೈ ನಮಃ |
ಓಂ ಮಹಾಪಾಶಾಯೈ ನಮಃ | 20
ಓಂ ಮಹಾಕಾರಾಯೈ ನಮಃ |
ಓಂ ಮಹಾಂಕುಶಾಯೈ ನಮಃ |
ಓಂ ವಿನೀತಾಯೈ ನಮಃ |
ಓಂ ವಿಮಲಾಯೈ ನಮಃ |
ಓಂ ವಿಶ್ವಾಯೈ ನಮಃ |
ಓಂ ವಿದ್ಯುನ್ಮಾಲಾಯೈ ನಮಃ |
ಓಂ ವಿಲಾಸಿನ್ಯೈ ನಮಃ |
ಓಂ ಚಂಡಿಕಾಯೈ ನಮಃ |
ಓಂ ಚಂದ್ರವದನಾಯೈ ನಮಃ |
ಓಂ ಚಂದ್ರಲೇಖಾವಿಭೂಷಿತಾಯೈ ನಮಃ|
ಓಂ ಸಾವಿತ್ರ್ಯೈ ನಮಃ |
ಓಂ ಸುರಸಾಯೈ ನಮಃ |
ಓಂ ದಿವ್ಯಾಯೈ ನಮಃ |
ಓಂ ದಿವ್ಯಾಲಂಕಾರಭೂಷಿತಾಯೈ ನಮಃ |
ಓಂ ವಾಗ್ದೇವ್ಯೈ ನಮಃ |
ಓಂ ವಸುಧಾಯೈ ನಮಃ |
ಓಂ ತೀವ್ರಾಯೈ ನಮಃ |
ಓಂ ಮಹಾಭೋಗಾಯೈ ನಮಃ |
ಓಂ ಮಹಾಬಲಾಯೈ ನಮಃ |
ಓಂ ಗೋದಾವರ್ಯೈ ನಮಃ | 40
ಓಂ ಗೋಮತ್ಯೈ ನಮಃ |
ಓಂ ಜಟಿಲಾಯೈ ನಮಃ |
ಓಂ ವಿಂಧ್ಯವಾಸಿನ್ಯೈ ನಮಃ |
ಓಂ ಗರ್ಜಿನ್ಯೈ ನಮಃ |
ಓಂ ಭೇದಿನ್ಯೈ ನಮಃ |
ಓಂ ಪ್ರೀತಾಯೈ ನಮಃ |
ಓಂ ಸೌದಾಮಿನ್ಯೈ ನಮಃ |
ಓಂ ಭೋಗದಾಯೈ ನಮಃ |
ಓಂ ಸತ್ಯವಾದಿನ್ಯೈ ನಮಃ |
ಓಂ ಸುಧಾಮೂತ್ರ್ಯೈ ನಮಃ | 50
ಓಂ ಸುಭದ್ರಾಯೈ ನಮಃ |
ಓಂ ಸುರವಂದಿತಾಯೈ ನಮಃ |
ಓಂ ಯಮುನಾಯೈ ನಮಃ |
ಓಂ ಸುಪ್ರಭಾಯೈ ನಮಃ |
ಓಂ ನಿದ್ರಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ನೀರಜಲೋಚನಾಯೈ ನಮಃ |
ಓಂ ತ್ರಿಮೂತ್ರ್ಯೈ ನಮಃ |
ಓಂ ತ್ರಿಕಾಲಜ್ಞಾಯೈ ನಮಃ |
ಓಂ ಬ್ರಹ್ಮಿಷ್ಠಾಯ್ಯೈ ನಮಃ | 60
ಓಂ ತ್ರಿಗುಣಾತ್ಮಿಕಾಯೈ ನಮಃ | ಓಂ ಮಹಾಶಾಂತ್ಯೈ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ಧಾರಿಣ್ಯೈ ನಮಃ |
ಓಂ ಸರ್ವಾತ್ಮಿಕಾಯೈ ನಮಃ |
ಓಂ ಶಾಸ್ತ್ರರೂಪಾಯೈ ನಮಃ |
ಓಂ ಶುಂಭಾಸುರಮರ್ದಿನ್ಯೈ ನಮಃ |
ಓಂ ಪದ್ಮಾಸನಾಯೈ ನಮಃ |
ಓಂ ಪದ್ಮಹಸ್ತಾಯೈ ನಮಃ |
ಓಂ ರಕ್ತಬೀಜನಿಹಂತ್ರ್ಯೈ ನಮಃ | 70
ಓಂ ಧೂಮ್ರಲೋಚನದರ್ಪಘ್ನ್ಯೈ ನಮಃ|
ಓಂ ನಿಶುಂಭಪ್ರಾಣಹಾರಿಣ್ಯೈ ನಮಃ |
ಓಂ ಚಾಮುಂಡಾಯೈ ನಮಃ |
ಓಂ ಚಂಡಹಂತ್ರ್ಯೈ ನಮಃ |
ಓಂ ಮುಂಡಕಾಯಪ್ರಭೇದಿನ್ಯೈ ನಮಃ |
ಓಂ ಸುಪ್ರಭಾಯೈ ನಮಃ |
ಓಂ ಕಾಳರಾತ್ರ್ಯೈ ನಮಃ |
ಓಂ ಸರ್ವದೇವಸ್ತುತಾಯೈ ನಮಃ |
ಓಂ ಅನಘಾಯೈ ನಮಃ |
ಓಂ ಪಂಚದಶದ್ವರ್ಣರೂಪಾಯೈ ನಮಃ|80
ಓಂ ಸುಧಾಕಲಶಧಾರಿಣ್ಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ಮಾಹೇಶ್ವರ್ಯೈ ನಮಃ |
ಓಂ ಕೌಮಾರ್ಯೈ ನಮಃ |
ಓಂ ವೈಷ್ಣವ್ಯೈ ನಮಃ |
ಓಂ ವಾರಾಹ್ಯೈ ನಮಃ |
ಓಂ ಮಾಹೇಂದ್ರ್ಯೈ ನಮಃ |
ಓಂ ಚಿತ್ರಾಂಬರವಿಭೂಷಿತಾಯೈ ನಮಃ |
ಓಂ ಚಿತ್ರಮಾಲಾಧರಾಯೈ ನಮಃ |
ಓಂ ಕಾಂತಾಯೈ ನಮಃ | 90
ಓಂ ಚಿತ್ರಗಂಧಾನುಲೇಪನಾಯೈ ನಮಃ |
ಓಂ ಅಕ್ಷಮಾಲಾಧರಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ರೂಪಸೌಭಾಗ್ಯದಾಯಿನ್ಯೈ ನಮಃ |
ಓಂ ಶ್ವೇತಾನನಾಯೈ ನಮಃ |
ಓಂ ನೀಲಭುಜಾಯೈ ನಮಃ |
ಓಂ ಪೀವರಸ್ತನಮಂಡಿತಾಯೈ ನಮಃ |
ಓಂ ಸೂಕ್ಷ್ಮಮಧ್ಯಾಯೈ ನಮಃ |
ಓಂ ರಕ್ತಪಾದಾಯೈ ನಮಃ |
ಓಂ ಉನ್ಮದಾಯೈ ನಮಃ | 100
ಓಂ ನೀಲಜಂಘಿತಾಯೈ ನಮಃ |
ಓಂ ಬುದ್ಧಿರೂಪಾಯೈ ನಮಃ |
ಓಂ ತುಷ್ಟಿರೂಪಾಯೈ ನಮಃ |
ಓಂ ನಿದ್ರಾರೂಪಾಯೈ ನಮಃ |
ಓಂ ಪುಷ್ಟಿರೂಪಾಯೈ ನಮಃ |
ಓಂ ಚತುರಾನನಜಾಯಾಯೈ ನಮಃ|
ಓಂ ಚತುರ್ವರ್ಗಫಲದಾಯೈ ನಮಃ |
ಓಂ ಶ್ರೀ ಶಾರದಾಂಬಿಕಾಯೈ ನಮಃ|108

|| ಇತಿ ಶ್ರೀ ಶಾರದಾ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ ||

What is Yagnopaveetham…

What is Yagnopaveetham?

Yagnopaveetham is a triple stranded sacrificial filament joined by a knot called Brahmagranthi that is worn by those initiated into the Gayathri recital.

Yagnopaveetham means a sacred covering on the body without which a Yagna or a sacred ritual cannot be performed.

It is also called as Brahmasuthram.

In Telugu it is called as Jandhyam,

In Tamil it is Poonal,
In Kannada it is called as Janivara.
In English it is called sacred thread.

Yagno-pavita means ‘thread of sacrifice’ that symbolizes the sacrifice of ego, anger & selfishness.

What significants three threads in Janivara?

‘Janivara”, the sacred thread is a composition of 3 threads, signifying Goddesses Gayatri (thought), Saraswati (word) and Savitri (deed) respectively.

Who should wear Yagnopaveetham?

In olden days both men and women used to wear Yagnopaveetham. But nowadays only men who are eligible and initiated into Gayathri Manthra wear it.

Among the Varnas, Brahmin, Kshatriya, Vysya who is a dwija can wear Yagnopaveetham.

They should start wearing from the day they are initiated into the Gayathri Manthra which generally happens through a ceremony called Upanayanam.

How many Yagnopaveethas one should wear?

It is said that a,

Brahmachari (unmarried person) should wear only one Yagnopaveetham that has three strands.

A Grihastha (married person) should wear two such Yagnopaveethas. It is in practice to wear three Yagnopaveethas by a Grihastha, the third one that acts as an Uttareeyam (upper dhothi).

What should be its length?

When you wear the length of Yagnopaveetham should come up to the navel level and it should be neither above nor below the navel.

It is said that if it is below the navel it will lead to the loss of power of penance and if it is above the navel it is Ayuksheenam (decline in longevity).

Manu Smruthi says that the potion below the navel is impure. We also find a reference to this in Dharma Sindhu.

Who are the Presiding Deities of Yagnopaveetham?

Omkaram (Pranava),
Agni,
Naaga,
Soma (Moon),
Pithru Devathas, Prajapathi,
Vayu,
Surya and
Vishve Devathas
are the Presiding Deities of Yagnopaveetham.

How to wear & remove Yagnopaveetham?

Wear Yagnopaveetham one by one reciting the relevant sankalpa and Yagnopaveetha dhaarana manthra.

Every time Aachamanam should be performed and Gayathri manthra should be recited ten times.

While wearing Yagnopaveetham it should be held by both hands with the knot in the Yagnopaveetham being held above by the right hand facing upwards.

Similarly old and worn out Yagnopaveetham should not be removed from above the neck.

It should be removed from below the navel without touching the feet. Logic behind removing from below the navel could be;

Man is said to be purer above the navel. Manu Smruthi says that, portion below the navel is impure.

After changing Yagnopaveetham the old one worn becomes a decayed thing.

It should not be removed from sacred portion of the body that is above the head.

Posture of Yagnopaveetham…

Generally we come across three postures of wearing Yagnopaveetham.

One is Upavita where the Yagnopaveetham is worn over the left shoulder and under the right arm. This posture is used for performing auspicious ceremonies and sacred rituals related to Gods.

This is called Savya position.

Under normal circumstances Yagnopaveetham should always be in Savya position.

The second one is Praachinavita where, Yagnopaveetham is worn above the right shoulder and under the left arm.

This position is used while performing sacred rites to the Forefathers (Pitru Karya).

This is called Apasavya position.

When Yagnopaveetham is worn around the neck and over the chest in maalakara (like a garland) and is held with both thumbs in the region of the heart and above the naval, it is Nivita.

This form is used during Rishi tarpana, sexual intercourse, answering nature calls, while carrying a corpse etc.

One would have observed devout Brahmins tying their Yagnopaveetham tightly to the right ear/left ear while attending nature calls.,While it is to protect the sacred thread from becoming soiled during the course of attending nature calls, there is also a health significance involved in it.

It is said that important nerves connecting excretory system pass through right/left ear. While passing urinals it is worn round the right ear and while passing stools it is worn round the left ear.

When pressure is applied it helps in regulating the functioning of excretory organs, perhaps the concept of Acupressure.

When to Change the Yagnopaveetham?

When once a person starts wearing Yagnopaveetham in normal circumstances it should not be removed and should be worn always (24 hours-365 days).

It is like a woman wearing a Mangala-Suthra forever. But in practice it is not possible to wear the same Yagnopaveetham permanently. Due to wear and tear, it may get soiled or worn out or gets broken and needs to be changed. One should not wear a broken or worn out Yagnopaveetham.

Apart from this it should be changed under the following circumstances.

Once in a year on the day of Upakarma;

Whenever there is Jataasoucham or Mruthaasoucham (birth/death in the family) after completion of the stipulated period of asoucha.

Whenever one visits the Cremation Ground or touches a Corpse.

Whenever one happen to touch a woman during menstruation.

Whenever the threads of Yagnopaveetham are severed or it is soiled or worn out.

Whenever one attends 10th day ceremony and gives Dharmodaka.

Whenever there is a need to change Yagnopaveetham it should not be removed recklessly.

First wear the new one and then remove the worn out as per the laid down procedure.

Technicalities of Yagnopaveetham…

Colour

As per scripts it is said that, sacred thread should be white in colour for Brahmins (all brahmin Samudayam)

Red in colour for Kshatriyas and

Yellow in colour for Vysyas.

But in practice we find all people using Yagnopaveetham which is white in colour.

Quality

As per scripts it is said that, Yagnopaveetham should be made up of cotton for Brahmins, silk for Kshatriyas and linen for Vysyas.

But in practice we find all people using Yagnopaveethams made from cotton.

Composition
Yagnopaveetham Navathanthu Nirmitham;

Yagnopaveetham is made up of nine layers of woven cotton thread spun by a virgin girl and twisted by a Brahmin reciting Gayathri manthra on an auspicious day.

Length of the thread used for making Yagnopaveetham as per scripts should be 96 breadths of four fingers measured by one’s own hand.

Thickness of the thread should be of a mustard seed size. Nowadays we don’t find such norms being followed in the making of Yagnopaveetham.

Arithmetic of number “96”

It is said that Gayathri Manthra has 24 letters and when it is added together from four Vedas it becomes 96 (24×4) that gives the power or eligibility to the Dwija to perform Yagna or Yagas and to recite Gayathri Manthra.

Four fingers represent four states of the soul a man experiences from time to time (waking, dreaming, dreamless sleep, and absolute Brahmanhood)

There is another arithmetic to this number, that is human body comprises of 25 elements, made up of three Gunas (Sattwa, Rajo, Tamo).

We have 16 thithis in the calendar,

27 Stars in the Almanac,

4 Vedas,

6 Ruthus in three Seasons (summer, winter and monsoon), and

12 months.

When all these are added together (25+3+16+27+4+6 +3+12) it comes to 96. It is said that human life rotates around these elements.

Significance of Nine layers

It is said that nine layers represent nine devathas who are the presiding deities of Yagnopaveetham viz.
Omkaram (Pranava),
Agni,
Naaga,
Soma (Moon),
Pithru Devathas, Prajapathi,
Vayu,
Surya and
Vishve Devathas.

Before wearing Yagnopaveetham one should offer prayer to all these nine deities.

Brahma Granthi

As per the scripts it is prescribed that the Yagnopaveetham should have knots equivalent to the number of Pravaras in one’s Gothra.

But in practice we find only one knot for the Yagnopaveetham.

The knot with which the three strands are tied together is called Brahma Granthi that signifies ParaBrahma (Pranavam) who is Sakala Veda Swaroopa.

There are many interpretations about the three strands of Yagnopaveetham.

It symbolizes three trinal Lords (Brahma Vishnu, Maheswara) and when tied together it becomes Para Brahma; three worlds (Bhu-Bhuvar- Suvar); three feminine energies (Lakshmi, Saraswathi and Durga); and three tattwas or qualities (Sattwa, Rajo, Tamo).

It is also interpreted as, three strands representing Ida, Pingala and Sushumna nadi through which the Kundalini energy manifests as prana and consciousness.

The three strands also indicate that one who wears it should have a triple control over his mind speech and body (thought, word and deed)

Dwija

Dwija mean twice born. There is no difference between one child and another at the time of birth.

All are born out of the mother’s womb only. This is the first stage of life (Sudra).

Second stage is getting upadesa of Gayathri at the time of Upanayanam when the boy becomes Dwija or twice-born.

He is then purified.

The third stage is Vipra when one has mastered the study of the Vedas.

The fourth stage is Brahmana when he actually realizes the Brahman through the knowledge of the Self.

One becomes a Brahmana not by birth but only when one realizes the Supreme Brahman.

One becomes a Brahmana by action and not by birth.

Why should one wear Yagnopaveetham?

Wearing Yagnopaveetham would increase the longevity of a person who wears, gives physical and mental strength through the worship of Sun God (Savitha) using Gayathri Mantra initiated during his Upanayanam.

By wearing Yagnopaveetham one gets purified both externally and internally.

By wearing Yagnopaveetham one gets the eligibility to perform spiritual and sacred rituals as prescribed in Vedas for his Varna.

Sacred rituals performed by wearing Yagnopaveetham give good results.

!Vinayagnopaveethenaa Bhojanam Kurthe Dwijam
Ajamoothrapureershena Rethassevanamevacha!!

One should not attend to nature calls, eat food, and participate in sexsual pleasures without Yagnopaveetham.

It is a prerequisite for learning Veda. It is a passport to obtain Vedic education.

Yagnopaveetham is a mark of formal entry into Brahminhood. It gives power and authority to pursue one’s spiritual path.

Significance of wearing Yagnopaveetham

The Vedic link that a child looses when the umbilical cord is cut is re established in the form of Yagnopaveetham.

In other words, Yagnopaveetham serves as an umbilical cord that connects him not just his immediate parents not just the three generations but the entire tree of generations and the Rishi on whose root the whole tree flourished.

The three strands remind the wearer that he has to pay off the three debts (Runas) he owes to the ancient seers, ancestors and to the God viz. Deva, Rushi, Pithru Runa.

Yagnopaveetham is not a mere symbol to identify a community.

Yagnopaveetham has sanctity of its own and one has to qualify himself for wearing it not by birth alone but also by practice.

He alone is a Brahmin who does his Nithya Karma, follows the path of Sanatana Dharma and remains free from ego, avarice, anger and pride.

What is the use of Yagnopaveetham for the one who is known to the world as a Brahmin?

It is not something that is worn for the world to know.

It is for the realization of Brahman within. The one who has thrown away his Yagnopaveetham but has led a life of truth is nobler compared to the one who wears Yagnopaveetham but does nothing to justify it.

Most interestingly the sanatkumAra saMhitA gives two forms of upanayanaM, the vedic form for dvijas and tantric agnimukhaM version for women and shUdras.

On recieving that they may perform several rites, but the pA~ncharatric brahmin is still supposed to perform vaidika rites to various deities in addition to the internal pA~ncharatric sacrifices to vedic deities given in the rudra rAtra.

ಹೋಮ ಹವನಾದಿಗಳ ಸೇವಾ ವಿವರಗಳು.

ಶ್ರೀ ಗುರುಭ್ಯೋ ನಮಃ

ಹೋಮ ಹವನಾದಿಗಳ ಸೇವಾ ವಿವರಗಳು :-

1) ಮೃತ್ಯುಂಜಯ ಹೋಮ : ₹201/- ,

2)ನವಗ್ರಹ ಹೋಮ : ₹251/- ,

3)ಗಣಪತಿ ಹೋಮ : ₹301/- ,

4)ಧನ್ವಂತರಿ ಹೋಮ : ₹501/- ,

5)ಗಾಯತ್ರಿ ಹೋಮ : ₹501/- ,

6)ಸರ್ವ ಸೇವಾ : ₹1201/- ,

7)ಶ್ರೀಗಳವರ ಭಿಕ್ಷಾವಂದನೆ: ₹501/-.

ಇಂತಿ

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು.

ವಿದ್ಯಾರಣ್ಯ ಸಮಿತಿ. ಸಂಡೂರು.

ಮಂಗಳಾರತಿ ತೆಗೆದುಕೊಳ್ಳುವ ವಿಧಾನ

ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಗಳಿಂದ ತೆಗೆದುಕೊಳ್ಳಬಾರದು ಒಂದೇ ಕೈಯಿಂದ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ .ಏಕೆ? ಇದಕ್ಕೆ ಯಾವುದಾದರೂ ಪ್ರಮಾಣ ಉಂಟಾ?

ಉತ್ತರ ||

ನೀರಾಜನ ಕಾಲದಲ್ಲಿ ದೇವರ ಮುಖದರ್ಶನ ಕೋಟಿ ಬ್ರಹ್ಮ ಹತ್ಯೆಗಳನ್ನು ಕೋಟಿ ಅಗಮ್ಯಾಗಮನ ದೋಷಗಳನ್ನು ನಾಶಮಾಡುತ್ತದೆ.

ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ನ ಸಂಶಯ: ||

ಮಂಗಳಾರತಿಯನ್ನು ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು. ಈ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ.
ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು, ಆಮೇಲೆ ಹೃದಯ, ಆಮೇಲೆ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು.
ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು.
ಅಲ್ಲಿಗೆ ನಮ್ಮ ದೇಹ ಶುದ್ಧ.
ಈ ಅನುಸಂಧಾನ ಮುಖ್ಯ.
|| ಕೃಷ್ಣಾರ್ಪಣಮಸ್ತು ||

ವಿದ್ಯಾರಣ್ಯ ಸಮಿತಿಯ id card formate

ಶ್ರೀ ಗುರುಭ್ಯೋ ನಮಃ . ವಿದ್ಯಾರಣ್ಯ ಸಮಿತಿಯ ಸದಸ್ಯರಿಗೆ ತಿಳಿಯಪಡಿಸುವುದೇನೆಂದರೆ ಸಮಿತಿಯ ID CARD ಮಾಡಿಸಲು ಕಳಿಸಿರುವ image ನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳಿರುವ ಮಾಹಿತಿಯನ್ನು ಬರೆದು ಇಂದು ಸಂಜೆ ವೇಳೆಗೆ ಕಳಿಸಬೇಕಾಗಿ ವಿನಂತಿ . ವಾಟ್ಸಾಪ್ ಅಥವಾ mail id ಗೆ ಕಳಿಸಿ (ತಪ್ಪದೆ ಸಂಜೆ ಒಳಗೇ ಕಳಿಸಿ ಇದಕ್ಕೆ 10ರೂಪಾಯಿ ಕೊಡತಕ್ಕದ್ದು ) ವಿದ್ಯಾರಣ್ಯ ಸಮಿತಿಯ mail I’d :- svs.sdr2017@gmail.com

 *ಶ್ರೀಶಂಕರ ಭಗವತ್ಪಾದಾಚಾರ್ಯ ಅಷ್ಟೋತ್ತರ ಶತನಾಮಾವಳಿ**(ಅರ್ಥಸಹಿತ)*

 *ಶ್ರೀಶಂಕರ ಭಗವತ್ಪಾದಾಚಾರ್ಯ ಅಷ್ಟೋತ್ತರ ಶತನಾಮಾವಳಿ*

*(ಅರ್ಥಸಹಿತ)*
******************************

ಶ್ರೀಶಂಕರಾಚಾರ್ಯವರ್ಯಾಯ ನಮಃ 1. ಪೂಜ್ಯರಾದ ಶ್ರೀ ಶಂಕರಾಚಾರ್ಯರಿಗೆ ನಮಸ್ಕಾರ

ಬ್ರಹ್ಮಾನಂದಪ್ರದಾಯಕಾಯ ನಮಃ 2. ಶಿಷ್ಯರಿಗೆ ಬ್ರಹ್ಮಾನಂದವನ್ನು ನೀಡುವವರು
ಅಜ್ಞಾನತಿಮಿರಾದಿತ್ಯಾಯ ನಮಃ 3. ಅಜ್ಞಾನವನ್ನು ಹೋಗಲಾಡಿಸುವವರು
ಸುಜ್ಞಾನಾಂಬುಧಿಚಂದ್ರಮಸೇ ನಮಃ 4. ಶಿಷ್ಯರಿಗೆ ಜ್ಞಾನವನ್ನು ವೃದ್ಧಿಸುವವರು
ವರ್ಣಾಶ್ರಮಪ್ರತಿಷ್ಠಾತ್ರೇ ನಮಃ 5. ವರ್ಣಾಶ್ರಮ ಧರ್ಮಗಳನ್ನು ರಕ್ಷಿಸಿದವರು
ಶ್ರೀಮತೇ ನಮಃ 6. ಸರ್ವೋತ್ಕೃಷ್ಟರಾದವರು
ಮುಕ್ತಿಪ್ರದಾಯಕಾಯ ನಮಃ 7. ಮೋಕ್ಷವನ್ನು ಅನುಗ್ರಹಿಸುವವರು
ಶಿಷ್ಶೋಪದೇಶನಿರತಾಯ ನಮಃ 8. ಶಿಷ್ಯರಿಗೆ ಧರ್ಮಬ್ರಹ್ಮತತ್ತ್ವಗಳನ್ನು ಉಪದೇಶಿಸುವವರು
ಭಕ್ತಾಭೀಷ್ಟಪ್ರದಾಯಕಾಯ ನಮಃ 9. ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವವರು
ಸೂಕ್ಷ್ಮತತ್ತ್ವರಹಸ್ಯಜ್ಞಾಯ ನಮಃ 10. ಸೂಕ್ಷವಾದ ಬ್ರಹ್ಮತತ್ತ್ವವನ್ನು ತಿಳಿದವರು
ಕಾರ್ಯಾಕಾರ್ಯಪ್ರಬೋಧಕಾಯ ನಮಃ 11. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು
ಸರಿಯಾಗಿ ತಿಳಿಸಿಕೊಡುವವರು
ಜ್ಞಾನಮುದ್ರಾಂಚಿತಕರಾಯ ನಮಃ 12. ಚಿನ್ಮುದ್ರೆಯನ್ನು ಕೈಯಲ್ಲಿ ಧರಿಸಿರುವವರು
ಶಿಷ್ಯಹೃತ್ತಾಪಹಾರಕಾಯ ನಮಃ 13. ಶಿಷ್ಯರ ಮನಸ್ಸಿನ ತಾಪವನ್ನು ಹೋಗಲಾಡಿಸುವವರು
ಪರಿವ್ರಾಜಾಶ್ರಮೋದ್ಧತ್ರ್ರೇ ನಮಃ 14. ಸಂನ್ಯಾಸ ಆಶ್ರಮವನ್ನು ಪುನರುದ್ಧಾರ ಮಾಡಿದವರು
ಸರ್ವತಂತ್ರಸ್ವತಂತ್ರಧಿಯೇ ನಮಃ 15. ಎಲ್ಲ ಶಾಸ್ತ್ರಗಳಲ್ಲಿಯೂ ಅಸಾಧಾರಣವಾದ ಪ್ರತಿಭೆಯುಳ್ಳವರು
ಅದ್ವೈತಸ್ಥಾಪನಾಚಾರ್ಯಾಯ ನಮಃ 16. ಅದ್ವೈತ ಸಿದ್ಧಾಂತವನ್ನು ಸ್ಥಾಪಿಸಿದವರು
ಸಾಕ್ಷಾಚ್ಛಂಕರರೂಪಧೃತೇ ನಮಃ 17. ಪರಮೇಶ್ವರನ ಅವತಾರಸ್ವರೂಪರು
ಷಣ್ಮತಸ್ಥಾಪನಾಚಾರ್ಯಾಯ ನಮಃ 18. ಶೈವ, ವೈಷ್ಣವ, ಶಾಕ್ತ, ಗಾಣಪಾತ್ಯ, ಸೌರ, ಕೌಮಾರ ಎಂಬ ಮತಗಳನ್ನು
ಸ್ಥಾಪಿಸಿದವರು
ತ್ರಯೀಮಾರ್ಗಪ್ರಕಾಶಕಾಯ ನಮಃ 19. ವೈದಿಕಧರ್ಮವನ್ನು ಪ್ರಕಾಶಪಡಿಸಿದವರು
ವೇದವೇದಾಂತತತ್ತ್ವಜ್ಞಾಯ ನಮಃ 20. ವೇದ-ವೇದಾಂತಗಳ ತತ್ತ್ವವನ್ನು ತಿಳಿದವರು
ದುರ್ವಾದಿಮತಖಂಡನಾಯ ನಮಃ 21. ವೇದವಿರುದ್ಧ ಮತವನ್ನು ಖಂಡಿಸುವವರು
ವೈರಾಗ್ಯನಿರತಾಯ ನಮಃ 22. ಅತ್ಯಂತ ವೈರಾಗ್ಯಶಾಲಿಗಳು
ಶಾಂತಾಯ ನಮಃ 23. ಮನಸ್ಸನ್ನು ಇಂದ್ರಿಯಗಳನ್ನು ನಿಗ್ರಹಿಸಿದವರು
ಸಂಸಾರಾರ್ಣವತಾರಕಾಯ ನಮಃ 24. ಸಂಸಾರವೆಂಬ ಸಾಗರವನ್ನು ದಾಟಿಸುವವರು
ಪ್ರಸನ್ನವದನಾಂಭೋಜಾಯ ನಮಃ 25. ಪ್ರಸನ್ನವಾದ ಮುಖಾರವಿಂದವನ್ನು ಹೊಂದಿರುವವರು
ಪರಮಾರ್ಥಪ್ರಕಾಶಕಾಯ ನಮಃ 26. ಬ್ರಹ್ಮ ತತ್ತ್ವವನ್ನು ತೋರಿಸಿಕೊಡುವವರು
ಪುರಾಣಸ್ಮೃತಿಸಾರಜ್ಞಾಯ ನಮಃ 27. ಪುರಾಣಗಳ ಮತ್ತು ಸ್ಮೃತಿಗಳ ಸಾರವನ್ನು ತಿಳಿದವರು
ನಿತ್ಯತೃಪ್ತಾಯ ನಮಃ 28. ಸದಾ ತೃಪ್ತರಾಗಿರುವವರು
ಮಹತೇ ನಮಃ 29. ಮಹಾತ್ಮರು
ಶುಚಯೇ ನಮಃ 30. ಪವಿತ್ರರಾಗಿರುವವರು
ನಿತ್ಯಾನಂದಾಯ ನಮಃ 31. ಸದಾ ಆನಂದಸ್ವರೂಪರಾಗಿರುವವರು
ನಿರಾತಂಕಾಯ ನಮಃ 32. ಭಯವಿಲ್ಲದವರು
ನಿಸ್ಸಂಗಾಯ ನಮಃ 33. ಸಂಸಾರ ಬಂಧನವನ್ನು ಹೊಂದಿರದವರು
ನಿರ್ಮಲಾತ್ಮಕಾಯ ನಮಃ 34. ಪರಿಶುದ್ಧವಾದ ಆತ್ಮವುಳ್ಳವರು
ನಿರ್ಮಮಾಯ ನಮಃ 35. ನನ್ನದು ಎಂಬ ಮಮಕಾರವಿಲ್ಲದವರು
ನಿರಹಂಕಾರಾಯ ನಮಃ 36. ಅಹಂಕಾರ ರಹಿತರು
ವಿಶ್ವವಂದ್ಯಪದಾಂಬುಜಾಯ ನಮಃ 37. ಎಲ್ಲರಿಂದಲೂ ವಂದಿಸಲ್ಪಡುವ ಪಾದಕಮಲಗಳುಳ್ಳವರು
ಸತ್ತ್ವಪ್ರಧಾನಾಯ ನಮಃ 38. ಸತ್ವಗುಣವನ್ನೇ ಪ್ರಧಾನವಾಗಿ ಹೊಂದಿರುವವರು
ಸದ್ಭಾವಾಯ ನಮಃ 39. ಉತ್ತಮವಾದ ಆಶಯವುಳ್ಳವರು
ಸಂಖ್ಯಾತೀತಗುಣೋಜ್ಜ್ವಲಾಯ ನಮಃ 40. ಅಸಂಖ್ಯಾತವಾದ ಸದ್ಗುಣಗಳಿಂದ ಶೋಭಿತರಾದವರು
ಅನಘಾಯ ನಮಃ 41. ಪಾಪರಹಿತರು
ಸಾರಹೃದಯಾಯ ನಮಃ 42. ದೃಢವಾದ ಮನಸ್ಸುಳ್ಳವರು
ಸುಧಿಯೇ ನಮಃ 43. ಪಂಡಿತರು
ಸಾರಸ್ವತಪ್ರದಾಯ ನಮಃ 44. ವಿದ್ಯೆಯನ್ನು ಕರುಣಿಸುವವರು
ಸತ್ಯಾತ್ಮನೇ ನಮಃ 45. ಸತ್ಯಸ್ವರೂಪರು
ಪುಣ್ಯಶೀಲಾಯ ನಮಃ 46. ಪವಿತ್ರವಾದ ಸ್ವಭಾವವುಳ್ಳವರು
ಸಾಂಖ್ಯಯೋಗವಿಚಕ್ಷಣಾಯ ನಮಃ 47. ಸಾಂಖ್ಯ ಹಾಗೂ ಯೋಗ ಶಾಸ್ತ್ರದಲ್ಲಿ ತಳಸ್ಪರ್ಶಿಪಾಂಡಿತ್ಯವುಳ್ಳವರು
ತಪೋರಾಶಯೇ ನಮಃ 48. ಮಹಾತಪಸ್ವಿಗಳಾದವರು
ಮಹಾತೇಜಸೇ ನಮಃ 49. ಉತ್ಕೃಷ್ಟವಾದ ತೇಜಸ್ಸಿನಿಂದ ಕೂಡಿದವರು
ಗುಣತ್ರಯವಿಭಾಗವಿದೇ ನಮಃ 50. ಸತ್ವ-ರಜಸ್ಸು-ತಮಸ್ಸು ಎಂಬ ಗುಣತ್ರಯಗಳ ವಿಭಾಗವನ್ನು ತಿಳಿದವರು
ಕಲಿಘ್ನಾಯ ನಮಃ 51. ಕಲಿಯುಗದ ದೋಷಗಳನ್ನು ನಿವಾರಿಸುವವರು
ಕಾಲಕರ್ಮಜ್ಞಾಯ ನಮಃ 52. ಕಾಲ ಮತ್ತು ಧರ್ಮಗಳನ್ನು ತಿಳಿದವರು
ತಮೋಗುಣನಿವಾರಕಾಯ ನಮಃ 53. ತಮೋಗುಣವನ್ನು ನಿವಾರಿಸುವವರು
ಭಗವತೇ ನಮಃ 54. ಷಡ್ವಿಧೈಶ್ವರ್ಯ ಸಂಪನ್ನರು
ಭಾರತೀಜೇತ್ರೇ ನಮಃ 55. ಉಭಯಭಾರತಿಯನ್ನು ವಾದದಲ್ಲಿ ಸೋಲಿಸಿದವರು
ಶಾರದಾಹ್ವಾನಪಂಡಿತಾಯ ನಮಃ 56. ಶ್ರೀಶಾರದಾಪರಮೇಶ್ವರಿಯನ್ನು ಶೃಂಗೇರಿಕ್ಷೇತ್ರದಲ್ಲಿ ಪ್ರತಿಷ್ಠಿಸಿದವರು
ಧರ್ಮಾಧರ್ಮವಿಭಾಗಜ್ಞಾಯ ನಮಃ 57. ಧರ್ಮ ಅಧರ್ಮಗಳ ವಿಭಾಗವನ್ನು ತಿಳಿದವರು
ಲಕ್ಷ್ಯಭೇದಪ್ರದರ್ಶಕಾಯ ನಮಃ 58. ಕರ್ಮಿ, ಭಕ್ತ ಉಪಾಸಕ ಮೊದಲಾದವರಿಗೆ ಅವರವರ ಲಕ್ಷ್ಯವನ್ನು
ತೋರಿಸಿಕೊಟ್ಟವರು
ನಾದಬಿಂದುಕಲಾಭಿಜ್ಞಾಯ ನಮಃ 59. ನಾದಕಲೆ ಹಾಗೂ ಬಿಂದುಕಲೆಗಳನ್ನು ತಿಳಿದವರು
ಯೋಗಿಹೃತ್ಪದ್ಮಭಾಸ್ಕರಾಯ ನಮಃ 60. ಯೋಗಿಗಳ ಮನಸ್ಸೆಂಬ ಕಮಲಕ್ಕೆ ಸೂರ್ಯನಂತಿರುವವರು (ಯೋಗಿಗಳಿಗೆ
ಮುದವನ್ನೀಯುವವರು)
ಅತೀಂದ್ರಿಯಜ್ಞಾನನಿಧಯೇ ನಮಃ 61. ಇಂದ್ರಿಯಗಳಿಗೆ ಅಗೋಚರವಾದ ಪದಾರ್ಥಗಳನ್ನು ತಿಳಿದವರು
ನಿತ್ಯಾನಿತ್ಯವಿವೇಕವತೇ ನಮಃ 62. ನಿತ್ಯ-ಅನಿತ್ಯ ವಸ್ತುಗಳ ವಿಭಾಗವನ್ನು ತಿಳಿದವರು
ಚಿದಾನಂದಾಯ ನಮಃ 63. ಜ್ಞಾನ ಮತ್ತು ಆನಂದಸ್ವರೂಪರು
ಚಿನ್ಮಯಾತ್ಮನೇ ನಮಃ 64. ಜ್ಞಾನಘನಸ್ವರೂಪರು
ಪರಕಾಯಪ್ರವೇಶಕೃತೇ ನಮಃ 65. ಪರಕಾಯಪ್ರವೇಶವನ್ನು ಮಾಡಿರುವವರು
ಅಮಾನುಷಚರಿತ್ರಾಢ್ಯಾಯ ನಮಃ 66. ಮನುಷ್ಯಮಾತ್ರರಿಗೆ ಅಸಾಧ್ಯವಾದ ಚರಿತ್ರೆಯುಳ್ಳವರು
ಕ್ಷೇಮದಾಯಿನೇ ನಮಃ 67. ಸರ್ವರಿಗೂ ಕ್ಷೇಮವನ್ನು ಕೊಡುವವರು
ಕ್ಷಮಾಕರಾಯ ನಮಃ 68. ಕ್ಷಮಾಶೀಲರು
ಭವ್ಯಾಯ ನಮಃ 69. ಮಂಗಲಸ್ವರೂಪರು
ಭದ್ರಪ್ರದಾಯ ನಮಃ 70. ಮಂಗಲವನ್ನು ನೀಡುವವರು
ಭೂರಿಮಹಿಮ್ನೇ ನಮಃ 71. ಮಹಾಮಹಿಮಶಾಲಿಗಳು
ವಿಶ್ವರಂಜಕಾಯ ನಮಃ 72. ಎಲ್ಲರನ್ನೂ ಸಂತೋಷಪಡಿಸುವವರು
ಸ್ವಪ್ರಕಾಶಾಯ ನಮಃ 73. ಸ್ವಯಂ ಜ್ಯೋತಿಸ್ವರೂಪರು
ಸದಾಧಾರಾಯ ನಮಃ 74. ಸಜ್ಜನರಿಗೆ ಆಶ್ರಯವಾಗಿರುವವರು
ವಿಶ್ವಬಂಧವೇ ನಮಃ 75. ಎಲ್ಲರಿಗೂ ಬೇಕಾಗಿರುವವರು
ಶುಭೋದಯಾಯ ನಮಃ 76. ಲೋಕಕ್ಷೇಮಕ್ಕಾಗಿ ಅವತರಿಸಿದವರು
ವಿಶಾಲಕೀರ್ತಯೇ ನಮಃ 77. ದಿಗಂತ ವಿಶ್ರಾಂತ ಶಕ್ತಿಯುಳ್ಳವರು
ವಾಗೀಶಾಯ ನಮಃ 78. ಸಕಲವಿದ್ಯಾಧಿಪತಿಗಳು
ಸರ್ವಲೋಕಹಿತೋತ್ಸುಕಾಯ ನಮಃ 79. ಎಲ್ಲರಿಗೂ ಹಿತವನ್ನುಂಟು ಮಾಡಿದವರು
ಕೈಲಾಸಯಾತ್ರಾ-ಸಂಪ್ರಾಪ್ತ-ಚಂದ್ರಮೌಲಿ-
ಪ್ರಪೂಜಕಾಯ ನಮಃ
80. ಕೈಲಾಸದಿಂದ ತಂದಿರುವ ಚಂದ್ರಮೌಲೀಶ್ವರನನ್ನು ಪೂಜಿಸುವವರು
ಕಾಂಚ್ಯಾಂ ಶ್ರೀಚಕ್ರರಾಜಾಖ್ಯ-ಯಂತ್ರಸ್ಥಾಪನ-
ದೀಕ್ಷಿತಾಯ ನಮಃ
81. ಕಾಂಚಿಕ್ಷೇತ್ರದಲ್ಲಿ ಶ್ರೀಕಾಮಾಕ್ಷಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀಚಕ್ರವನ್ನು
ಸ್ಥಾಪಿಸಿದವರು
ಶ್ರೀಚಕ್ರಾತ್ಮಕ-ತಾಟಂಕ-ತೋಷಿತಾಂಬಾ-
ಮನೋರಥಾಯ ನಮಃ
82. ಶ್ರೀಚಕ್ರರೂಪದ ಕರ್ಣಾಭರಣವನ್ನು ಸಮರ್ಪಿಸಿ ಅಮ್ಮನವರನ್ನು
ಸಂತೋಷಗೊಳಿಸಿದವರು
ಶ್ರೀಬ್ರಹ್ಮಸೂತ್ರೋಪನಿಷದ್ಭಾಷ್ಯಾದಿ-
ಗ್ರಂಥಕಲ್ಪಕಾಯ ನಮಃ
83. ಬ್ರಹ್ಮಸೂತ್ರಭಾಷ್ಯ-ಉಪನಿಷದ್ಭಾಷ್ಯ ಮುಂತಾದ ಗ್ರಂಥಗಳನ್ನು ರಚಿಸಿದವರು
ಚತುರ್ದಿಕ್ಚತುರಾಮ್ನಾಯ ಪ್ರತಿಷ್ಠಾತ್ರೇ ನಮಃ 84. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದವರು
ಮಹಾಮತಯೇ ನಮಃ  85. ತೀಕ್ಷ್ಣಬುದ್ಧಿಯುಳ್ಳವರು
ದ್ವಿಸಪ್ತತಿಮತೋಚ್ಛೇತ್ರೇ ನಮಃ 86. ಶ್ರುತಿವಿರುದ್ಧವಾದ ಎಪ್ಪತ್ತೆರಡು ಮತಗಳನ್ನು ಖಂಡಿಸಿದವರು
ಸರ್ವದಿಗ್ವಿಜಯಪ್ರಭವೇ ನಮಃ 87. ಎಲ್ಲ ಕಡೆಗಳಲ್ಲೂ ದಿಗ್ವಿಜಯವನ್ನು ಮಾಡಿದವರು
ಕಾಷಾಯವಸನೋಪೇತಾಯ ನಮಃ 88. ಕಾಷಾಯವಸ್ತ್ರವನ್ನು ಧರಿಸಿರುವವರು
ಭಸ್ಮೋದ್ಧೂಲಿತವಿಗ್ರಹಾಯ ನಮಃ 89. ಭಸ್ಮಾಲಂಕೃತ ಶರೀರವುಳ್ಳವರು
ಜ್ಞಾನಾತ್ಮಕೈಕದಂಡಾಢ್ಯಾಯ ನಮಃ 90. ಜ್ಞಾನಸ್ವರೂಪವಾದ ದಂಡವನ್ನು ಧರಿಸಿರುವವರು
ಕಮಂಡಲುಲಸತ್ಕರಾಯ ನಮಃ 91. ಕಮಂಡಲುವನ್ನು ಕೈಯಲ್ಲಿ ಧರಿಸಿದವರು
ಗುರುಭೂಮಂಡಲಾಚಾರ್ಯಾಯ ನಮಃ 92. ಭೂಮಂಡಲಕ್ಕೆ ಆಚಾರ್ಯರಾಗಿರತಕ್ಕಂತಹ ಗುರುಶ್ರೇಷ್ಠರು
ಭಗವತ್ಪಾದಸಂಜ್ಞಕಾಯ ನಮಃ 93. ಭಗವತ್ಪಾದರು ಎಂದು ಪ್ರಸಿದ್ಧರಾದವರು
ವ್ಯಾಸಸಂದರ್ಶನಪ್ರೀತಾಯ ನಮಃ 94. ವೇದವ್ಯಾಸರ ದರ್ಶನದಿಂದ ಸಂತುಷ್ಟರಾದವರು
ಋಷ್ಯಶೃಂಗಪುರೇಶ್ವರಾಯ ನಮಃ 95. ಶೃಂಗೇರಿಕ್ಷೇತ್ರದ ಅಧೀಶ್ವರರು
ಸೌಂದರ್ಯಲಹರೀಮುಖ್ಯ-ಬಹುಸ್ತೋತ್ರ-
ವಿಧಾಯಕಾಯ ನಮಃ
96. ಸೌಂದರ್ಯಲಹರೀ ಮುಂತಾದ ಅನೇಕ ಸ್ತೋತ್ರಗಳನ್ನು ರಚಿಸಿರುವವರು
ಚತುಷ್ಷಷ್ಟಿಕಲಾಭಿಜ್ಞಾಯ ನಮಃ 97. ಅರವತ್ತನಾಲ್ಕು ಕಲೆಗಳನ್ನು ತಿಳಿದವರು
ಬ್ರಹ್ಮರಾಕ್ಷಸಮೋಕ್ಷದಾಯ ನಮಃ 98. ಬ್ರಹ್ಮರಾಕ್ಷಸನಿಗೆ ಮೋಕ್ಷವನ್ನಿತ್ತವರು
ಶ್ರೀಮನ್ಮಂಡನಮಿಶ್ರಾಖ್ಯ-ಸ್ವಯಂಭೂಜಯ-
ಸನ್ನುತಾಯ ನಮಃ
99. ಶ್ರೀಮಂಡನಮಿಶ್ರರನ್ನು ವಾದದಲ್ಲಿ ಸೋಲಿಸಿದವರು
ತೋಟಕಾಚಾರ್ಯಸಂಪೂಜ್ಯಾಯ ನಮಃ 100. ಶ್ರೀತೋಟಕಾಚಾರ್ಯರಿಂದ ಸೇವಿಸಲ್ಪಟ್ಟವರು
ಪದ್ಮಪಾದಾರ್ಚಿತಾಂಘ್ರಿಕಾಯ ನಮಃ 101. ಶ್ರೀಪದ್ಮಪಾದಾಚಾರ್ಯರಿಂದ ಪೂಜಿಸಲ್ಪಟ್ಟವರು
ಹಸ್ತಾಮಲಕ-ಯೋಗೀಂದ್ರ-ಬ್ರಹ್ಮಜ್ಞಾನ-
ಪ್ರದಾಯಕಾಯ ನಮಃ
102. ಶ್ರೀಹಸ್ತಾಮಲಕಚಾರ್ಯರಿಗೆ ಬ್ರಹ್ಮಜ್ಞಾನವನ್ನು ಅನುಗ್ರಹಿಸಿದವರು
ಸುರೇಶ್ವರಾಖ್ಯ-ಸಚ್ಛಿಷ್ಯ-
ಸನ್ನ್ಯಾಸಾಶ್ರಮದಾಯಕಾಯ ನಮಃ
103. ಸುರೇಶ್ವರಾಚಾರ್ಯರಿಗೆ ಸಂನ್ಯಾಸಾಶ್ರಮವನ್ನು ನೀಡಿದವರು
ನೃಸಿಂಹಭಕ್ತಾಯ ನಮಃ 104. ನರಸಿಂಹ ದೇವರ ಭಕ್ತರು
ಸದ್ರತ್ನಗರ್ಭಹೇರಂಬ-ಪೂಜಕಾಯ ನಮಃ 105. ರತ್ನಗರ್ಭ ಗಣಪತಿಯನ್ನು ಪೂಜಿಸುವವರು
ವ್ಯಾಖ್ಯಾಸಿಂಹಾಸನಾಧೀಶಾಯ ನಮಃ 106. ವ್ಯಾಖ್ಯಾನ ಸಿಂಹಾಸನಕ್ಕೆ ಅಧಿಪತಿಗಳು
ಜಗತ್ಪೂಜ್ಯಾಯ ನಮಃ 107. ಎಲ್ಲರಿಂದಲೂ ಪೂಜಿಸಲ್ಪಡುವವರು
ಜಗದ್ಗುರವೇ ನಮಃ 108. ಜಗತ್ತಿಗೆ ಗುರುವಾಗಿರುವವರು

ಶ್ರೀಮಚ್ಛಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ
ಶ್ರೀ ಶಂಕರ ಭಗವತ್ಪಾದಾಚಾರ್ಯರಿಗೆ ನಮಸ್ಕಾರ

ಏಕಶ್ಲೋಕೀ ರಾಮಾಯಣ

ಮಜ್ಜಿಗೆ ರಾಮಾಯಣ & ಮೆಣಸಿನಕಾಯಿ ರಾಮಾಯಣ
=============
ಏಕಶ್ಲೋಕೀ ರಾಮಾಯಣ ಎಂದು ಪ್ರಸಿದ್ಧವಾದ ಇದು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿರಬಹುದು.

ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹೀಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಮ್ ।
ವಾಲೀನಿರ್ದಲನಂ ಸಮುದ್ರತರಣಂ ಲಂಕಾಪುರೀದಾಹನಂ
ಪಶ್ಚಾದ್ರಾವಣಕುಂಭಕರ್ಣಹನನಮೇತದ್ಧಿ ರಾಮಾಯಣಮ್ ॥

ಇದು ರಾಮಾಯಣದ ಕತೆಯನ್ನು ನಾಲ್ಕೇ ಸಾಲುಗಳಲ್ಲಿ ಹೇಳುತ್ತದೆ. ಮೊದಲಿಗೆ ರಾಮ ಕಾಡಿಗೆ ಹೋದನು. ಬಂಗಾರದ ಜಿಂಕೆಯನ್ನು ಕೊಂದನು. ಸೀತೆಯ ಅಪಹರಣವಾಯ್ತು. ಜಟಾಯು ಸತ್ತ. ಸುಗ್ರೀವನೊಡನೆ ರಾಮನ ಸಖ್ಯವಾಯ್ತು. ವಾಲೀವಧೆ ಆಯ್ತು. ಸಾಗರೋಲ್ಲಂಘನವೂ ಆಯ್ತು. ಹನುಮ ಲಂಕೆಯನ್ನು ಸುಟ್ಟದ್ದಾಯ್ತು. ಆಮೇಲೆ ರಾವಣ ಕುಂಭಕರ್ಣರನ್ನು ಇತಿಶ್ರೀಗೊಳಿಸಲಾಯ್ತು ಎಂಬಲ್ಲಿಗೆ ರಾಮಾಯಣ ಮುಗಿಯಿತು.

ಒಮ್ಮೆ ದಾಸಯ್ಯನೊಬ್ಬ ಭಿಕ್ಷೆ ಬೇಡುತ್ತ ತಿರುಗುತ್ತಿದ್ದವನು ಒಂದು ಮನೆಯೆದುರಿಗೆ ಬಂದುನಿಲ್ಲುತ್ತಾನೆ. ಆ ಮನೆಯಲ್ಲೊಬ್ಬ ಅಜ್ಜಿ ವಾಸವಾಗಿರುತ್ತಾಳೆ. ಭಿಕ್ಷೆ ಕೊಡಿ ಎಂದು ದಾಸಯ್ಯ ಕೇಳಿದ್ದಕ್ಕೆ ನನ್ನ ಬಳಿ ಏನೂ ಇಲ್ಲವಲ್ಲ ಎನ್ನುತ್ತಾಳೆ ಅಜ್ಜಿ. ಬಾಯಾರಿಕೆಯಾಗಿದೆ ಸ್ವಲ್ಪ ಮಜ್ಜಿಗೆಯಾದರೂ ಕೊಡಿ ಎಂದು ದಾಸಯ್ಯನ ಬೇಡಿಕೆ. ಅಜ್ಜಿಯ ಬಳಿ ಅರ್ಧ ಲೋಟವಾಗುವಷ್ಟು ಮಜ್ಜಿಗೆ ಇತ್ತು, ಆದರೆ ಸುಮ್ಸುಮ್ನೆ ಯಾಕೆ ಕೊಡೋದಂತ ಯೋಚನೆ ಮಾಡುತ್ತಾಳೆ. ‘ಮಜ್ಜಿಗೆ ಕೊಡುತ್ತೇನೆ, ಆದರೆ ನೀನು ರಾಮಾಯಣವನ್ನೋ ಮಹಾಭಾರತ ಭಾಗವತ ಇತ್ಯಾದಿ ಪುರಾಣಕತೆಯನ್ನೋ ಹೇಳಬೇಕಾಗುತ್ತದೆ.’ಎನ್ನುತ್ತಾಳೆ. ಅದಕ್ಕೊಪ್ಪಿದ ದಾಸಯ್ಯ ಈಮೇಲಿನ ಶ್ಲೋಕವನ್ನು ಹೇಳುತ್ತಾನೆ. ಇಷ್ಟೇನಾ ಎಂದು ನಿರಾಸೆಯಿಂದೆಂಬಂತೆ ಅಜ್ಜಿ ಕೇಳುತ್ತಾಳೆ.
’ಮತ್ತೆಷ್ಟು? ಅರೆಲೋಟ ಮಜ್ಜಿಗೆಗೆ ತಕ್ಕಷ್ಟೇ ರಾಮಾಯಣ. ಹಾಗಾಗಿ ಇದು ಮಜ್ಜಿಗೆ ರಾಮಾಯಣ!’ ಎಂದು ದಾಸಯ್ಯ ಉವಾಚ.

ಇದನ್ನು ದೂರದಿಂದ ನೋಡುತ್ತಿದ್ದ ಇನ್ನೊಬ್ಬ ಜಿಪುಣಾಗ್ರೇಸರ, ಆ ದಾಸಯ್ಯ ಅವನ ಮನೆಗೆ ಬಂದು ಭಿಕ್ಷೆ ಕೇಳಿದಾಗ ಮೆಣಸಿನಕಾಯಿ ಕೊಡುತ್ತಾನೆ. ಅವನದೂ ಅದೇ ಷರತ್ತು, ರಾಮಾಯಣ ಹೇಳದೇ ಭಿಕ್ಷೆ ಸಿಗೋದಿಲ್ಲ ಅಂತ. ದಾಸಯ್ಯನ ಬುದ್ಧಿಯಾದರೋ ಮೆಣಸಿನಕಾಯಿಯಷ್ಟೇ ಚುರುಕು. ಅವನೆನ್ನುತ್ತಾನೆ: “ಹುಟ್ಟಿ ಕಟ್ಟಿ ಕುಟ್ಟಿ ಮುಟ್ಟಿ” – ತಗೊಳ್ಳಿ ಇದು ನಿಮಗೆ ನಾಲ್ಕೇನಾಲ್ಕು ಪದಗಳಲ್ಲಿ ರಾಮಾಯಣ! “ಅದು ಹೇಗೆ?” ಎಂದು ತಕರಾರೆತ್ತುತ್ತಾನೆ ಜಿಪುಣಾಗ್ರೇಸರ.
“ಶ್ರೀರಾಮಚಂದ್ರನು ಹುಟ್ಟಿ, ವಾನರಸೇನೆಯನ್ನು ಕಟ್ಟಿ, ರಾವಣಾಸುರನನ್ನು ಕುಟ್ಟಿ, ಮರಳಿ ಅಯೋಧ್ಯೆ ಮುಟ್ಟಿದಾಗ ರಾಮಾಯಣ ಮುಗಿಯಿತು.” – ಮೆಣಸಿನಕಾಯಿ ಪಡೆದುಕೊಂಡ ದಾಸಯ್ಯ ಕೂಲ್ ಆಗಿಯೇ ಉತ್ತರಿಸಿ ಅಲ್ಲಿಂದ ಮುನ್ನಡೆಯುತ್ತಾನೆ